ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಿರಿಯ ಚಂಡೆ ವಾದಕ ಕಷ್ಣ ಯಾಜಿಗೆ ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಡಿಸೆ೦ಬರ್ 21 , 2013
ಡಿಸೆ೦ಬರ್ 21, 2013

ಹಿರಿಯ ಚಂಡೆ ವಾದಕ ಕಷ್ಣ ಯಾಜಿಗೆ ಸನ್ಮಾನ

ಶಿರಸಿ : ಕಳೆದ 40 ವರ್ಷಗಳಿಂದ ಕಲಾಸೇವೆಗೆಯುತ್ತಿರುವ ಹಿರಿಯ ಚಂಡೆ ವಾದಕ ಹೊನ್ನಾವರದ ಕಷ್ಣ ಯಾಜಿ ಇಡಗುಂಜಿ ಅವರನ್ನು ಯಡಳ್ಳಿ ವಿದ್ಯೋದಯ ಪಪೂ ಕಾಲೇಜಿನಲ್ಲಿ ನಡೆದ ಯಕ್ಷನಾದ ವೆಭವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪಂ.ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಮತ್ತು ಜನನಿ ಮ್ಯೂಸಿಕ್ ಸಂಸ್ಥೆ ಹಾಗೂ ಸ್ಥಳಿಯ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಸಹಯೋಗದಲ್ಲಿ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಧುರೀಣ ಎನ್.ಪಿ. ಗಾಂವಕರ್, ಕಷ್ಣ ಯಾಜಿ ಅವರಿಗೆ ಶಾಲುಹೊದೆಸಿ, ಫಲತಾಂಬೂಲ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಇಂದಿನ ಕಾಲಮಾನದಲ್ಲಿ ಹತ್ತಾರು ಕಲಾವಿದರನ್ನು ಒಂದೇ ವೇದಿಕೆಗೆ ಕರೆತಂದು ಸಂಘಟನೆ ಮಾಡುವ ಕೆಲಸಕಾರ್ಯ ಸುಲಭವಾದದ್ದಲ್ಲ. ನಗರ ಪ್ರದೇಶದಲ್ಲಿ ಕೆಲವೊಂದು ಸಂಘಟನಾ ಕಾರ್ಯಕ್ಕೆ ಸಂಬಂಧಪಟ್ಟು ಸೌಕರ್ಯದ ವ್ಯವಸ್ಥೆ ದೊರೆಯುತ್ತದೆ. ಆದರೆ ಗ್ರಾಮೀಣದಲ್ಲಿ ಕಲೆ-ಸಂಸ್ಕೃತಿ ಕುರಿತಾಗಿ ಕಾರ್ಯಕ್ರಮ ಸಂಘಟಿಸುವಾಗ ಅದರಲ್ಲಿ ಬಹಳ ಶ್ರಮವಿರುತ್ತದೆ. ಅದನ್ನ ಲಕ್ಷದಲ್ಲಿ ಇಟ್ಟುಕೊಂಡು ಕಳೆದ ಹತ್ತು ಹದಿನೆದು ವರ್ಷಗಳ ಕಾಲ ಕಲಾ ಸೇವೆ ಮಾಡುತ್ತಿರುವದು ಶ್ಲಾಘನೀಯ ಎಂದರು.

ಕಷ್ಣ ಯಾಜಿ ಇಡಗುಂಜಿ
ಅಭಿನಂದನಾ ಭಾಷಣ ಮಾಡಿದ ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಇಂದು ಸಂಗೀತ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಅಭ್ಯಸಿಸಿ ಸಾಧನೆಯ ಮೆಟ್ಟಿಲು ಹತ್ತುತ್ತಿರುವ ಯುವಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಕೊಡುವದರೊಂದಿಗೆ ಸಾಧನೆಗೆದ ಹಿರಿಯ ಕಲಾಕಾರರಿಗೆ ಸನ್ಮಾನಿಸುವ ಕಾರ್ಯ ಶ್ಲಾಘನೀಯವಾಗಿದೆ. ಒಂದೇ ವೇದಿಕೆಯಲ್ಲಿ ಹಿರಿಕಿರಿಯ ಕಲಾವಿದರನ್ನು ಕೂಡಿಸುವದು ಅದರೊಂದಿಗೆ ಯುವ ಪೀಳಿಗೆ ನೀರ್ಲಕ್ಷ ವಹಿಸುತ್ತಿರುವ ನಮ್ಮ ಸಂಸ್ಕ್ರತಿ ಪರಂಪರೆಯಿಂದ ಕೂಡಿದ ಶಾಸ್ತ್ರೀಯ ಕಾರ್ಯಕ್ರಮಗಳನ್ನು ಗ್ರಾಮೀಣದ ಅಲ್ಲಲ್ಲಿಯ ಸ್ಥಳದಲ್ಲಿ ಸಂಘಟನೆಯನ್ನು ಮಾಡುತ್ತಿರುವದು ಹೆಮ್ಮೆಯ ಸಂಗತಿ. ಅದರೊಂದಿಗೆ 40 ವರ್ಷಗಳ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಕಲಾವಿದನಿಗೆ ಸನ್ಮಾನಿಸಿ ಅವರ ಕಲಾ ಸೇವೆಗೆ ಇನ್ನಷ್ಟು ಪ್ರೋತ್ಸಾಹ ನೀಡಿರುವ ಉತ್ತಮ ಕೆಲಸ ಎಂದರು.

ಶಿರಸಿ ಅಡಕೆ ವರ್ತಕರ ಸಂಘದ ಕಾರ್ಯದರ್ಶಿ ಸತೀಶ ಭಟ್ಟ ನಾಡಗುಳಿ ಮಾತನಾಡಿ, ಗ್ರಾಮೀಣ ಶಿಕ್ಷಣ ಸಂಸ್ಥೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಸಂಘಟಿಸುತ್ತ, ಅದರೊಂದಿಗೆ ಇಂದು ಅತಿ ಅವಶ್ಯವಾಗಿ ಮಕ್ಕಳಿಗೆ ಬೇಕಾದ ಇನ್ನಿತರ ಭಾಷಾಭ್ಯಾಸದ ಮಾರ್ಗದರ್ಶನ ಕೂಡಾ ನೀಡುವಂತಾಗಲಿ ಎಂದರು. ಲಯನ್ಸ ಕ್ಲಬ್‌ನ ಖಜಾಂಚಿ ಪ್ರಗತಿ ಲೊಕೇಶ ಹೆಗಡೆ ಮಾತನಾಡಿ, ಶಾಸ್ತ್ರೀಯ ಕಲಾ ಪ್ರಕಾರಗಳನ್ನು ಕೂಡಿಸಿ ವೆವಿದ್ಯಮಯವಾಗಿ ಹೊಸದೊಂದು ಕಾರ್ಯಕ್ರಮ ಮಾಡುವುದು ಶ್ರೇಷ್ಠವಾಗಿದೆ ಎಂದರು.

ಶ್ರೀಪಾದ್ ರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಸಂಸ್ಥಾಪಕ ಟ್ರಸ್ಟಿ ದೀಪಕ್ ಹೆಗಡೆ ದೊಡ್ಡೂರು, ಸನ್ಮಾನಿತ ಚಂಡೆವಾದಕ ಕಷ್ಣಯಾಜಿ ಇಡಗುಂಜಿ ಮಾತನಾಡಿದರು. ಅಧ್ಯಕ್ಷತೆಯನ್ನು ಯಡಳ್ಳಿ ಮಾ.ಶಿ.ಪ್ರ.ಸಂಸ್ಥೆಯ ಅಧ್ಯಕ್ಷ ಎಂ.ಎನ್.ಹೆಗಡೆ ಬಳಗಂಡಿ ವಹಿಸಿದ್ದರು. ಯುವ ಗಾಯಕಿ ಪೂಜಾ ರಾಜಾರಾಮ್ ಹೆಗಡೆ ಪ್ರಾರ್ಥಿಸಿದಳು. ಪ್ರಾಚಾರ್ಯ ಪ್ರೋ.ಬಿ.ಬಿ.ಕುಂದರಗಿಯವರು ಸ್ವಾಗತಿಸಿದರು. ಶಿಕ್ಷಕ ಕೆ.ಜಿ.ಭಟ್ಟ ಸನ್ಮಾನ ಪತ್ರವಾಚಿಸಿದರು. ಕಾರ್ಯಕ್ರಮ ಸಂಘಟಕ ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಮುಖ್ಯಾಧ್ಯಾಪಕ ಮಹೇಶ ಭಟ್ಟ ವಂದಿಸಿದರು.

ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ